ಇನ್ನೋಸ್ಟಾರ್ಮ್ ಎಂಟರ್ಟೈನ್ಮೆಂಟ್ ಗ್ರೂಪ್ ಮತ್ತು ಟ್ರೆಂಡ್ಸ್ ಆಡ್ ಫಿಲ್ಮ್ಸ್ (ಪ್ರೈ) ಲಿಮಿಟೆಡ್ ಲಾಂಛನದಲ್ಲಿ ವಚನ್ ಶೆಟ್ಟಿ, ವಿ.ಕೆ.ಪ್ರಕಾಶ್, ನಿರ್ಮಿಸುತ್ತಿರುವ ದೇವೆರ್ ತುಳು ಚಿತ್ರಕ್ಕೆ ವಿಜಯಾ ರೆಕಾರ್ಡಿಂಗ್ ಸ್ಟುಡಿಯೋನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ನೆರವೇರಿತು. ಈ ಚಿತ್ರದ ಕಥೆ - ಚಿತ್ರಕಥೆ ಸಂಭಾಷಣೆ, ನಿರ್ದೇಶನ ಸುಧಾಕರ್ ಬನ್ನಂಜೆ, ಸಂಗೀತ -ಮದನ್ ಮೋಹನ್, ಛಾಯಗ್ರಹಣ -ನಾಗರಾಜ್ ಅದ್ವಾನಿ, ಸಂಕಲನ - ಕೆ.ಗಿರೀಶ್ ಕುಮಾರ್, ಕಲೆ - ತಮ್ಮ ಲಕ್ಷ್ಮಣ್, ಸಹ ನಿರ್ದೇಶಕರು - ಹೆದ್ದೂರ್ ಮಂಜು, ರಾಮದಾಸ್, ಸಸಿಹತ್ಲು ಶ್ರೀರಾಂ, ಕಾರ್ಯಕಾರಿ ನಿರ್ಮಾಪಕ - ಕಾರ್ಕಳ ಶೇಖರ ಭಂಡಾರಿ ನಿರ್ವಹಣೆ -ನಂಜುಂಡರಾಜ್ ಅರಸ್.
ತಾರಾಗಣದಲ್ಲಿ ನಾಯಕನಾಗಿ ಸುಧೀರ್, ನಾಯಕಿಯಾಗಿ ಲಹರಿ ಅಲ್ಲದೆ ಮಾಸ್ಟರ್ ಪ್ರೇರಣ್, (ದ್ವಿಪಾತ್ರ), ಸುಧಾಕರ್ ಬನ್ನಂಜೆ, ಕಾರ್ಕಳ ಶೇಖರ್ ಭಂಡಾರಿ, ಸಹನಾಭಂಡಾರಿ, ಚೇತನ್ ರೈ, ತಾರಾನಾಥ್ ಉರ್ವ ಶಾಂಭವ ಕಾರ್ಕಳ, ಜಾನ್ ಮಣಿಪಾಲ್ ಉಮೇಶ್ ಅಮೀನ್, ಸುಂದರ ಹೆಗ್ಡೆ ತಮ್ಮ ಲಕ್ಷ್ಮಣ್, ಸಾವ್ಯ, ಪ್ರಿಯಾ, ಸುನೀತಾ ರಾಘವೇಂದ್ರ, ಸ್ವಾತಿ, ಬಿಂದು ಮಹೇಶ್ ಮುಂತಾದವರು ಅಭಿನಯಿಸಿದ್ದಾರೆ.